Podchaser Logo
Home
Gandhi: Part 2 - Achievements ಗಾಂಧಿ : ಭಾಗ ೨ - ಸಾಧನೆ

Gandhi: Part 2 - Achievements ಗಾಂಧಿ : ಭಾಗ ೨ - ಸಾಧನೆ

Released Sunday, 21st April 2024
Good episode? Give it some love!
Gandhi: Part 2 - Achievements ಗಾಂಧಿ : ಭಾಗ ೨ - ಸಾಧನೆ

Gandhi: Part 2 - Achievements ಗಾಂಧಿ : ಭಾಗ ೨ - ಸಾಧನೆ

Gandhi: Part 2 - Achievements ಗಾಂಧಿ : ಭಾಗ ೨ - ಸಾಧನೆ

Gandhi: Part 2 - Achievements ಗಾಂಧಿ : ಭಾಗ ೨ - ಸಾಧನೆ

Sunday, 21st April 2024
Good episode? Give it some love!
Rate Episode

👍 Like it? ...... ⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠

👁️ ⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠ 

📧 ⁠⁠⁠⁠⁠⁠⁠⁠⁠⁠⁠Subscribe to our newsletter

ಸಾಮಾನ್ಯ ಮಾನವನಾಗಿ ಹುಟ್ಟಿದ ಮೋಹನದಾಸ ರಾಷ್ಟ್ರಪಿತ, ಬಾಪು, ಗಾಂಧಿ ತಾತ, ಕೊನೆಗೆ ಮಹಾತ್ಮನಾದ. ಈತ ಮಾಡಿದ್ದಾದರೂ ಏನು?

ಮಹಾತ್ಮ ಗಾಂಧಿಮೂರು ಕಂತುಗಳಲ್ಲಿ:ಭಾಗ ೧ರಲ್ಲಿ ಗಾಂಧೀ ಜಿವನದ ಸಮಗ್ರ ಸಂಕ್ಷಿಪ್ತ ನೋಟಭಾಗ ೨ರಲ್ಲಿ ಗಾಂಧಿ ಸಾಧಿಸಿದ್ದಾದರೂ ಏನು ಎಂದು ತಿಳಿದುಕೊಳ್ಳುವ ಪ್ರಯತ್ನಈ ಲೇಖನ ಕನ್ನಡ ಕಲಿ ಮ್ಯಗ್ಝೀನ್‌ ತುತ್ತೂರಿಯ September ಮತ್ತು ಡಿಸೆಂಬರ ೨೦೦೭ರ ಸಂಚಿಕೆಗಳಲ್ಲಿ ಮೊದಲು ಪ್ರಕಟವಾಗಿತ್ತುಭಾಗ ೩ರಲ್ಲಿ ಈ ಲೇಖನಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳು-ಗಾಂಧಿ ಸಾಧಿಸಿದ್ದಾದರೂ ಏನು?

ಗಾಂಧಿಯನ್ನು ಕೆಲವರು ದೇವತೆಯಂತೆ ಪೂಜಿಸುವವರಾದರೆ ಇನ್ನು ಹಲವರು ಕ್ಷುಲ್ಲಕ ಕಾರಣಗಳಿಗಾಗಿ ಅವರ ಎಲ್ಲ ತತ್ವಗಳನ್ನು ಅನಾದರಣೆಯಿಂದ ನೋಡುವವರಿದ್ದಾರೆ. ಈ ಇಬ್ಬರೂ ಗಾಂಧಿಯನ್ನು ಅರಿತುಕೊಂಡಿಲ್ಲ. -ಇದೊ ನೋಡಿ, ನಿಜವಾಗಿಯೂ ಒಂದು ಗಾಂಧಿ ಗುಡಿಯನ್ನು ಕಟ್ಟಿದ್ದಾರೆ. ತಮಿಳುನಾಡಿನ ಎರೋಡು ಜಿಲ್ಲೆಯ ಸಲಂಗಪಾಳಯದಲ್ಲಿ ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ಗಾಂಧಿಗೆ ಪೂಜೆ, ಆರತಿ, ಮತ್ತು ಪ್ರಸಾದ. ಇದ್ದ ಕಡವರನ್ನೆಲ್ಲ ಇಲ್ಲೈ ಇಲ್ಲೈ ಎಂದು ಬೀದಿಗೆ ದಬ್ಬಿ, ಒಲ್ಲದವನಿಗೆ ಪೂಜೆ ಮಾಡುವ ಈ ಸಲ್ಲದ ಪರಿ ಎಂಥದು? ಗಾಂಧಿ ಇನ್ನೂ ಬದುಕಿದ್ದರೆ ಇದನ್ನು ಕಂಡು ತಾವೇ ನೇಣು ಹಾಕಿಕೊಳ್ಳುತ್ತಿದ್ದರೋ ಏನೋ! ಗಾಂಧಿಯ ಜೀವನಕ್ಕೆ, ತತ್ವಗಳಿಗೆ, ನಡತೆಗೆ, ಮತ್ತು ಆದರ್ಶಗಳಿಗೆ ಇದೊಂದು ಅಪಚಾರ. "ಗಾಂಧಿಯ ಜೀವನದ ಆದರ್ಶಗಳು ನಮಗೆ ಅನ್ವಯಿಸುವುದಿಲ್ಲ. ಯಾಕೆಂದರೆ ಗಾಂಧಿ ದೇವತೆ, ನಾವು ಹುಲು ಮಾನವರು" ಎಂದು ಸೋಲನ್ನು ಒಪ್ಪಿಕೊಳ್ಳುತ್ತ, ಇಲ್ಲವೆ ಚಾಣಾಕ್ಷತೆಯಿಂದ, ಮನುಷ್ಯತ್ವದ ಜವಾಬುದಾರಿಯಿಂದ ತಪ್ಪಿಸಿಕೊಳ್ಳುವ ಯತ್ನವೆ ಗಾಂಧಿಯನ್ನು ದೈವೀಕರಿಸುವುದು. ಗಾಂಧಿ ಈಗ ಹಳಸಿದ ಹಾಲು. ಬೆಕ್ಕು ಮುಟ್ಟದು. ಚೆಲ್ಲಲು ಆಗದು. ಅದಕ್ಕೆ ಗುಡಿ ಎನ್ನುವ ತಂಗಳು ಪೆಟ್ಟಿಗೆಯಲ್ಲಿ ಕೂಡಿ ಹಾಕಿದರಾಯಿತು! ರಾಮ ಬಸವ ಬುದ್ಧರ ಗತಿಯೂ ಇದೆ ಆಗಿದೆ. ಸಹಸ್ರಮಾನಗಳಿಂದ ನಡೆದುಕೊಂಡ ಬಂದ ಭಾರತೀಯ ಪದ್ಧತಿಯೆ ಇದು!

ಗಾಂಧಿಗೆ ನೊಬೆಲ್ ಪಾರಿತೋಷಕ ಕೊಡಲಿಲ್ಲ ಎಂದು ಹಲವರು ಹಂಬಲಿಸಿ ಕೊರಗುತ್ತಿದ್ದರೆ, ನೋಬೆಲ್ ಕಮಿಟಿ ತಮ್ಮ ತಪ್ಪಿಗಾಗಿ ಒಳಗೇ ತಳಮಳಿಸುತ್ತಿದೆಯೆ? ಆಕಸ್ಮಾತ್ತಾಗಿ ತಪ್ಪಾಗಿದೆ ಎನ್ನುವ ಹೇಳಿಕೆ ಬಂದರೂ ನಂಬಲು ಅಸಾಧ್ಯ. ಗಾಂಧಿಯ ಹೆಸರು, ಇನ್ನೂ ಜೀವಂತವಾಗಿ ಇದ್ದಾಗ, ಒಮ್ಮೆ ಅಂತೂ ಸಾಯುವ ಕೆಲ ದಿನಗಳ ಮುಂಚೆ, ಐದು ಬಾರಿ ನೊಬೆಲ್ ಕಮಿಟಿಯ ಮುಂದೆ ಬಂದಿತ್ತು. ಪ್ರತಿ ಬಾರಿಯೂ, "ಗಾಂಧಿ ನಿಜವಾದ ರಾಜಕಾರಣಿಯೂ ಅಲ್ಲ, ಸಮಾಜ ಸೇವಕನೂ ಅಲ್ಲ" ಎಂದು ಪ್ರಶಸ್ತಿಯನ್ನು ಕಮಿಟಿ ನಿರಾಕರಿಸಿತು. ಕಮಿಟಿಯ ಆ ನಿಲುವಿನಲ್ಲಿ ಈಗಲೂ ಬದಲಾವಣೆ ಆಗಿಲ್ಲ. ಆದರೂ ಏನು ಪ್ರಯೋಜನ? ಸತ್ತವರಿಗೆ ನೋಬೆಲ್ ಪ್ರಶಸ್ತಿ ಕೊಡುವುದಂತೂ ಇಲ್ಲ. ಕೊಟ್ಟರೂ ಈಗ ಅದಕ್ಕೆ ಏನು ಬೆಲೆ? ೧೯೪೮ರಲ್ಲಿ ಗಾಂಧಿ ತೀರಿದ ನಂತರ ನೊಬೆಲ್ ಕಮಿಟಿ ಆ ವರ್ಷ "ಅರ್ಹರಾದವರು ಯಾರೂ ಬದುಕಿಲ್ಲ" ಎಂದು ಯಾರಿಗೂ ಪ್ರಶಸ್ತಿಯನ್ನು ಕೊಡಲಿಲ್ಲ. ಅದೆ ಅವರು ಗಾಂಧಿಗೆ ತೋರಿದ ಮರ್ಯಾದೆ ಎಂದುಕೊಂಡಿದ್ದಾರೆ. ಬೇರೆಯವರಿಗೆ ಪ್ರಶಸ್ತಿ ಕೊಡದೆ ಮಾಡಿದ ಅವಮರ್ಯಾದೆ ತಮಗೆ ಹೇಗೆ ಮರ್ಯಾದೆ ಆಗುತ್ತದೆ ಎಂದು ಗಾಂಧಿಯೆ ಇವರನ್ನು ಪ್ರಶ್ನಿಸುತ್ತಿದ್ದರು. ನೆನಪಿಸಿಕೊಳ್ಳಿ, ರಿಚರ್ಡ್ ಅಟೆನ್‌ಬರೋಗೆ ಗಾಂಧಿ ಚಿತ್ರ ನಿರ್ಮಿಸಲು ಸ್ಫೂರ್ತಿ ಕೊಟ್ಟ ಗಾಂಧಿಯ ಈ ನುಡಿ, "ಬೇರೆಯವರ ಅವಮಾನದಲ್ಲಿ ತನ್ನ ಸನ್ಮಾನ ಇದೆ ಎನ್ನುವ ಮನುಷ್ಯನ ನಡತೆ ನನಗೆ ಒಂದು ಬಿಡಿಸದ ರಹಸ್ಯ." ಇನ್ನು ಮೇಲೆ, ನೊಬೆಲ್ ಕಮಿಟಿ ತನ್ನ ಸಂವಿಧಾನವನ್ನು ಬದಲಿಸಿ ಗಾಂಧಿಗೆ ಮರಣೋತ್ತರ ಪ್ರಶಸ್ತಿಯನ್ನು ಕೊಟ್ಟರೆ ಅದಕ್ಕಿಂತ ಹೆಚ್ಚಿನ ಅವಮಾನ ಗಾಂಧಿಗೆ ಇಲ್ಲ, ನೊಬೆಲ್ ಕಮಿಟಿಗೆ ಇಲ್ಲ. ಎಲ್ಲ ಪ್ರಶಸ್ತಿಗಳನ್ನು ಮೀರಿ ನಿಂತ ಗಾಂಧಿಗೆ ಇಂಥ ಯಾವ ಮರ್ಯಾದೆಗಳೂ ಬೇಕಿಲ್ಲ. ಪ್ರಶಸ್ತಿ ಕೊಟ್ಟಿದ್ದರೆ ಅದರ ಘನತೆ ಹೆಚ್ಚು,ತ್ತಿತ್ತು. ಅದಕ್ಕೆ, ನೊಬೆಲ್ ಕಮಿಟಿ, ಒಂದು ರೀತಿಯಿಂದ, ಪ್ರಶಸ್ತಿ ಕೊಟ್ಟು ಗಾಂಧಿಗೆ ಅವಮಾನ ಮಾಡಲಿಲ್ಲವಲ್ಲ ಎಂದುಕೊಳ್ಳಬೇಕು. ಗಾಂಧಿಯನ್ನು ನಿಜವಾಗಿ ಅರ್ಥ ಮಾಡಿಕೊಂಡು ಇದಕ್ಕಾಗಿ ಕೊರಗುವುದನ್ನು ನಿಲ್ಲಿಸಬೇಕು.

ಗಾಂಧಿಯ ಸಾಧನೆ ಆದರ್ಶಗಳ ತಪ್ಪು ತಿಳುವಳಿಕೆಗಳೆ ಈ ಆಭಾಸಗಳಿಗೆ ಕಾರಣ. ಗಾಂಧಿಯನ್ನು ತಿಳಿದುಕೊಂಡವರು ಇದ್ದಾರೆ. "ಬದಲಾವಣೆಗೆ ಅಹಿಂಸಾತ್ಮಕವಾದ ಹೊಸ ಮಾರ್ಗವನ್ನೆ ತೊರಿಸಿಕೊಟ್ಟ ಗಾಂಧಿಗೆ ಸಲ್ಲಿಸಿದಮನ್ನಣೆ

... ಪೂರ್ತಿ ಲೇಖನವನ್ನು ಜಾಲತಾಣದಲ್ಲಿ ಓದಿ--00:00.0 ಪೀಠಿಕೆ01:52.8 ಗಾಂಧಿಗೊಂದು ಗುಡಿ!03:11.7 ಗಾಂಧಿಗಿಲ್ಲ ನೊಬೆಲ್‌ ಪಾರಿತೋಷಕ!05:21.7 ಗಾಂಧಿಯನ್ನು ತಿಳಿದವರು05:30.7 ಬದಲಾವಣೆಗೆ ಅಹಿಂಸಾತ್ಮಕವಾದ ಹೊಸ ಮಾರ್ಗ05:45.0 ಗಾಂಧಿಯನ್ನು ಕಡೆಗಣಿಸುವುದೆ ನಮ್ಮ ವಿಪತ್ತು05:56.8 ಗಾಂಧಿ ಎಂಟು ಘೋರ ಸಂಘರ್ಷಗಳ ಪುರೋಗಾಮಿ06:47.2 ಗಾಂಧೀಜಿ ಇಂದಿಗೂ ಪ್ರಸ್ತುತ07:01.2 ಸತ್ಯ ಅಹಿಂಸೆಗಳ ಭದ್ರ ನೆಲೆಗಟ್ಟು07:18.1 ನೈತಿಕ, ಆಧ್ಯಾತ್ಮಿಕ, ಸದಭಿರುಚಿಯ ಅಡಿಪಾಯ07:42.0 ದೇಶಪ್ರೇಮ, ಆತ್ಮಾಭಿಮಾನ, ಅಭಯದ ಕಿಡಿ08:13.6 ಸ್ವಾತಂತ್ರ್ಯಕ್ಕೆ ಅರ್ಥ08:38.6 ಸ್ವದೇಶಿ, ಸ್ವಾವಲಂಬನೆ, ಶರೀರ ಶ್ರಮ, ವೃತ್ತಿ ಗೌರವ09:08.8 ಜನಸೇವೆಯೇ ಜನಾರ್ದನ ಸೇವೆ00:34.0 ಸರ್ವ ಧರ್ಮ ಸಮಭಾವ09:46.0 ಭರತಖಂಡದ ಸ್ವಾತಂತ್ರ್ಯದ ರೂವಾರಿ - ಇತರರಿಗೆ ಮಾದರಿ10:00.3 ದ್ವೇಷ ದಹಕ, ಪ್ರೇಮ ಪ್ರವರ್ಧಕ10:10.3 ಶ್ರೀಸಾಮಾನ್ಯ ತನ್ನನ್ನೇ ತಾನು ಕಡೆದು ಊರ್ಜಿತಗೊಂಡು ವಿಶ್ವಮಾನವನಾದುದು10:31.7 ಹಿಂಸೆ, ಯುದ್ಧಗಳು ಮಾರ್ಗವಲ್ಲ; ಹಿಂಜರಿಯುವದು / ಶರಣಗತರಾಗುವದು ಉಚಿತವಲ್ಲ11:35.5 "ನನ್ನ ಜೀವನವೆ ನನ್ನ ಸಂದೇಶ"12:06.5 ಆಧಾರಗಳು12.25 ಕೃತಜ್ಞತೆ, ಸಂಪರ್ಕ

---

Support this podcast: https://podcasters.spotify.com/pod/show/kannadakali/support

Show More

Unlock more with Podchaser Pro

  • Audience Insights
  • Contact Information
  • Demographics
  • Charts
  • Sponsor History
  • and More!
Pro Features